ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷ ಮುಖವರ್ಣಿಕೆಯಲ್ಲಿ ಸಂಭ್ರಮಿಸಿದ ಕೊರಗ ಮಕ್ಕಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 22 , 2013
ಒಕ್ಟೋಬರ್ 22 , 2013

ಯಕ್ಷ ಮುಖವರ್ಣಿಕೆಯಲ್ಲಿ ಸಂಭ್ರಮಿಸಿದ ಕೊರಗ ಮಕ್ಕಳು

ಕುಂದಾಪುರ : ಯಕ್ಷಗಾನ ಕೊರಗ ಸಮುದಾಯದಿಂದ ಬಹು ದೂರವೇ ಉಳಿದಿದೆ. ಕೊರಗ ಸಮುದಾಯದವರು ಯಕ್ಷಗಾನ ಕ್ಷೇತ್ರದಲ್ಲೂ ಬಹಳ ವಿರಳ. ಆದರೀಗ ಈ ಸಮುದಾಯ ಮೊದಲ ಬಾರಿಗೆ ಯಕ್ಷಗಾನದ ಮುಖವರ್ಣಿಕೆಯ ಅನುಭವ ಪಡೆದು ಹರ್ಷಚಿತ್ತರಾದ ನೋಟ ಶನಿವಾರ ಕುಂಭಾಸಿಯಲ್ಲಿ ಕಂಡುಬಂತು.

ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಮಿತಿ ಹಾಗೂ ಐಟಿಡಿಪಿ ಉಡುಪಿ ಕೊರಗ ಮಕ್ಕಳಿಗಾಗಿ ಕುಂಭಾಸಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ವಿಶೇಷ ಶಿಬಿರ ಮಾತಾಡು-2013ರ ಭಾಗವಾಗಿ ಯಕ್ಷಗಾನ ಮುಖವರ್ಣಿಕೆಯ ಪ್ರಾತ್ಯಕ್ಷಿಕೆ ನಡೆಯಿತು.

ಭಾಸ್ಕರ ನಡೂರು ಶಿಬಿರದಲ್ಲಿ ಭಾಗವಹಿಸಿರುವ ಕೊರಗ ಮಕ್ಕಳಿಗೆ ಯಕ್ಷಗಾನದ ವೇಷಗಳಿಗೆ ಒಪ್ಪುವ ಬಣ್ಣಗಾರಿಕೆ ತೋರಿಸಿಕೊಟ್ಟಿದ್ದಲ್ಲದೆ ಮಕ್ಕಳ ಮುಖಕ್ಕೆ ಬಣ್ಣ ಬಿಡಿಸಿದರು. ಹನುಮ, ರಕ್ಕಸ, ಸ್ತ್ರೀವೇಷ, ಪುರುಷ ವೇಷ ಹೀಗೆ ನಾನಾ ಪ್ರಕಾರದ ಬಣ್ಣಗಾರಿಕೆಯ ಸ್ವಾನುಭವ ಪಡೆದ ಮಕ್ಕಳು ಸಂತೋಷದಿಂದ ಕುಣಿದಾಡಿದರು. ಯಕ್ಷಗಾನ ಕಲಾವಿದ ಶ್ರೀಧರ ಉಪ್ಪುಂದ ಪ್ರಾತ್ಯಕ್ಷಿಕೆಯಲ್ಲಿ ಸಹಕರಿಸಿದರು.

ಕೊರಗ ಸಮುದಾಯದವರು ಯಕ್ಷಗಾನ ರಂಗ ಪ್ರವೇಶಿಸಿದ್ದೇ ಇಲ್ಲ ಅಂತನಿಸುತ್ತಿದೆ. ಕೊನೆ ಪಕ್ಷ ಯಕ್ಷಗಾನದ ವೈಭವಪೂರಿತ ಬಣ್ಣಗಾರಿಕೆಯ ಅನುಭವ ಪಡೆದುಕೊಂಡಿರುವುದು ಜೀವನದಲ್ಲಿ ಎಂದಿಗೂ ಮರೆಯಲಾಗದ ಘಟನೆ. ಬಣ್ಣಗಾರಿಕೆ ನಡೆಸಿಕೊಟ್ಟವರು ಸಹ ಧನ್ಯತಾಭಾವ ಪಡೆದರು. ಸಮುದಾಯದ ಮಕ್ಕಳು ಯಕ್ಷಗಾನದ ಇತರೆ ಪ್ರಕಾರಗಳ ಅನುಭವ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. - ಗಣೇಶ್ ಬಾರ್ಕೂರು, ಶಿಬಿರಾಧಿಕಾರಿ

ಕೃಪೆ : http://vijaykarnataka.indiatimes.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ